Celebrated Kanakadasa Jayanthi on 3rd December 2020
Celebrated Constitutional Day on 26th November 2020
Celebrated Karnataka_Rajyotsava on 1st November 2020
Celebrated Valmiki Jayanthi On 31/10/2020
151ನೇ ಗಾಂಧಿ ಜಯಂತಿ ಹಾಗೂ 116 ನೇ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ
ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ
ಕಲ್ಯಾಣ ಕರ್ನಾಟಕ ದಿನಾಚರಣೆ ಕಾರ್ಯಕ್ರಮ
ಶಿಕ್ಷಕರ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ ಕಾರ್ಯಕ್ರಮ
ದಿನಾಂಕ 05-09-2020 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಪನಹಳ್ಳಿಯ ಆವರಣದಲ್ಲಿ ಆಂತರಿಕ
ಭರವಸಾ ಕೋಶ, ನ್ಯಾಕ್,ಸಾಂಸ್ಕೃತಿಕ ವಿಭಾಗ ,ಗ್ರಂಥಾಲಯ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ
ಅಡಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಾಗೂ ಅಂತರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿತ್ತು. ಪೌಷ್ಠಿಕ ಆಹಾರ ದಿನಾಚರಣೆ ಅಂಗವಾಗಿ ಶ್ರೀಮತಿ ಸಾವಿತ್ರಿ ಹೊಸಮನಿಯವರು ಸಂಪನ್ಮೂಲ
ವ್ಯಕ್ತಿಗಳಾಗಿ ಆಗಮಿಸಿ, ತಮ್ಮ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಕ್ಕಳಿಗೆ ಪೌಷ್ಠಿಕ ಆಹಾರ
ದೊರಕಿಸುವುದರಲ್ಲಿ ತಂದೆತಾಯಿಯರ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ, ಅಲ್ಲದೆ ಜಂಕ್ ಪುಡ್ ಗಳಲ್ಲಿ ಯಾವುದೇ
ರೀತಿಯ ಪೌಷ್ಠಿಕಾಂಶಗಳು ಮಕ್ಕಳಿಗೆ ದೊರೆಯುವುದಿಲ್ಲ ಹಾಗಾಗಿ ಅವುಗಳಿಂದ ಮಕ್ಕಳನ್ನು ದೂರ ಇಟ್ಟು ಮನೆಯ
ಆಹಾರವನ್ನೆ ಮಕ್ಕಳಿಗೆ ತಿನ್ನವಂತೆ ಮನವೊಲಿಸಲು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ
ಪ್ರಾಂಶುಪಾಲರಾದ ಡಾ.ಎಸ್. ಷಣ್ಮುಖನಗೌಡ್ರು ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತಭಾಷಣವನ್ನು
ಡಾ.ಭೀಮಪ್ಪನವರು,ಪ್ರಾರ್ಥನೆಯನ್ನು ನಾಗರತ್ನ. ಬಿ.ಹೊಸಮನಿಯವರು, ಪ್ರಾಸ್ತಾವಿಕ ನುಡಿಯನ್ನು ಪುನೀತ್ ರಾಜ್
ರವರು,ಹಾಗೂ ನಿರೂಪಣೆಯನ್ನು ಹುಚ್ಚರಾಯಪ್ಪ. ಕೆ.ಎಂ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಾಗರಾಜ
ಎಂ.ಎನ್ ಐ.ಕ್ಯೂ.ಎ.ಸಿ ಸಂಚಾಲಕರಾದ ವಿಜಯಕುಮಾರ್. ಎಂ, ಡಾ.ಬಸವರಾಜ,ರಹಮತ್. ಜಿ,ಗಿರೀಶ್
ಎಂ.ಎಸ್,ವೀರೇಶ್, ಪ್ರಭುನಾಯ್ಕ, ವೀರೇಶ್ ಎಸ್.ಎಂ,ಮೆಹಬೂಬ್ ಭಾಷಾ,ಸುರೇಖಾ. ಬಿ,ದಿವ್ಯಶ್ರೀ, ಮುಖ್ಯ
ಅಧೀಕ್ಷರಾದ ಸವಿತಾ,ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳೆಲ್ಲರೂ ಭಾಗವಹಿಸಿದ್ದರು.