• ವಿದ್ಯಾರ್ಥಿಗಳು ಸಂಗೀತ, ನೃತ್ಯ, ಕಲೆ, ಚರ್ಚೆ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಧ್ಯಾಪಕರ ಮಾರ್ಗದರ್ಶನದಲ್ಲಿ ವಿವಿಧ ಸ್ಪರ್ದೆಗಳ್ಲಲಿ ಭಾಗವಹಿಸಲು ಅವಕಾಶ ರಾಜ್ಯ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ.
 • ಅತುತ್ತಮ ದೈಹಿಕ ಶಿಕ್ಷಣ ಚಟುವಟಿಕೆಗಳ್ಲಿ ತೊಡಗಿಕೊಂಡು ವಿಶ್ವವಿದ್ಯಾನಿಲಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ದೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಪಾರಿತೋಷಕಗಳನ್ನು ಪಡೆದಿರುತ್ತಾರೆ.
 • ಸಮಾಜಮುಖೀ ಸೇವೆಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯಾ ಸೇವಾ ಯೋಜನೆಯ ಎರಡು ಘಟಕಗಳಿದ್ದು, ವಾಷರ್ಿಕ ವಿಶೇಷ ಶಿಬಿರ, ಪರಿಸರ ಅಭಿವೃದ್ಧಿ ಮತ್ತು ಆರೋಗ್ಯ ಅರಿವು ಕಾರ್ಯಕ್ರಮ, ವ್ಯಕ್ತಿತ್ವ ವಿಕಸನ ಶಿಬಿರಗಳು ನಡೆಯುತ್ತವೆ.
 • ವಿದ್ಯಾರ್ಥಿಗಳಲ್ಲಿ ಸಾಹಸ ಪ್ರವೃತ್ತಿ, ಸೇವಾ ತನ್ಮಯತೆ ಮುಂತಾದವುಗಳನ್ನು ಬೆಳಸಲು ಸ್ಕೌಟ್ಸ್ ಮತ್ತು ಗೈಡ್ಸ್ನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗಗಳಿವೆ. ಯುವಕರಲ್ಲಿ ಸ್ಪೂತರ್ಿ ತುಂಬಿ ವಿಪತ್ತು ನಿರ್ವಹಣಾ ಅರಿವು. ರಕ್ತದಾನ, ಇನ್ನಿತರ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಯುವರೆಡ್ ಕ್ರಾಸ್ ವಿಭಾಗವಿದೆ.
 • ಉದ್ಯೋಗ ಮಾಹಿತಿ ಕೇಂದ್ರ,  ಟೆಲಿ ಎಜುಕೇಶನ್ ಸೌಲಭ್ಯವಿರುತ್ತವೆ.

ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆಗಳು:

 • ಕಾಲೇಜಿನಲ್ಲಿ ಎಲ್ಲಾ ಸಮಯಗಳಲ್ಲಿಯೂ ಮೊಬೈಲ್ ಫೋನ್ ಬಳಕೆ ನಿಷೇಧಿಸಲಗಿದೆ.
 • ಕಾಲೇಜಿನ ಆವರಣವನ್ನು ಮತ್ತು ತರಬೇತಿ ಕೊಠಡಿಗಳನ್ನು ಸ್ವಚ್ಚವಾಗಿಡಲು ಸಹಕರಿಸುವುದು.
 • ಕಾಲೇಜಿನ ಆವರಣದಲ್ಲಿ ಅನಾವಶ್ಯಕವಾಗಿ ತಿರುಗಾಡದೆ ಗ್ರಂಥಾಲಯ/ವಾಚನಾಲಯಗಳನ್ನು ಉಪಯೋಗಿಸಿಕೊಳ್ಳುವುದು.
 • ವಿದ್ಯಾರ್ಥಿಗಳುಗಳು ತಮ್ಮ ಗುರುತಿನ ಪತ್ರವನ್ನು ಸದಾ ತಮ್ಮ ಬಳಿ ಇಟ್ಟುಕೊಂಡಿರಬೇಕು. ಅಗತ್ಯ ಬಿದ್ದಾಗ ತಪ್ಪದೇ ಹಾಜರುಪಡಿಸಬೇಕು.
 • ವಿದ್ಯಾರ್ಥಿಗಳುಗಳು ತಪ್ಪದೇ ಪ್ರತಿದಿನ ಸೂಚನಾ ಫಲಕದಲ್ಲಿ ಪ್ರಕಟಿಸಿರುವ ಸೂಚನೆಗಳನ್ನು ಗಮನಿಸಿ ಆದೇಶಗಳನ್ನು ಮತ್ತು ಸೂಚನೆಗಳನ್ನು ಪಾಲಿಸುವುದು.
 • ಸೂಕ್ತ ಕಾರಣವಿಲ್ಲದೆ ಗೈರುಹಾಜರಾದಲ್ಲಿ ಅಂತಹ ವಿದ್ಯಾರ್ಥಿಗಳ ವಿವರಗಳನ್ನು ತಂದೆ-ತಾಯಿಯವರಿಗೆ ಅಥವಾ ಪೋಷಕರಿಗೆ ತಿಳಿಸಲಾಗುವುದು. ದೀರ್ಘಕಾಲ ಗೈರು ಹಾಜರಿರುವವರು ತಪ್ಪದೇ ತಮ್ಮ ಪೋಷಕರೊಂದಿಗೆ ಕಾಲೇಜಿಗೆ ಬಂದು ಪ್ರಾಂಶುಪಾಲರ ಅನುಮತಿಯನ್ನು ಪಡೆಯುವುದು.
 • ಕಾಲೇಜಿನ ಆವರಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ, ಪ್ರಕರಣಗಳು ನಡೆಯದಂತೆ ಎಚ್ಚರವಹಿಸಿ ಎಲ್ಲರೊಂದಿಗೆ ಸಹಕರಿಸುವುದು.
 • ಕಾಲೇಜಿನ ಆವರಣದಲ್ಲಿ ಗುರುತಿನಚೀಟಿ, ಬಸ್ ಪಾಸ್, ಹಣದ ಚೀಲ ಇತ್ಯಾದಿಗಳು ದೊರೆತಲ್ಲಿ ತಪ್ಪದೇ ಅದನ್ನು ಪ್ರಾಂಶುಪಾಲರಿಗೆ ತಲುಪಿಸುವುದು.
 • ಎನ್.ಸಿ.ಸಿ., ಎನ್.ಎಸ್.ಎಸ್., ಭಾರತ ಸ್ಕೌಟ್ಸ್ & ಗೈಡ್ಸ್ ಘಟಕಗಳಿಗೆ ಪ್ರವೇಶ ಪಡೆದು, ಸ್ನಾತಕೋತ್ತರ ಶಿಕ್ಷಣ ಮತ್ತು ಉದ್ಯೋಗಗಳಿಗೆ ವಿಶೇಷ ಪರಿಗಣನೆಗೊಳಗಾಗುವ ಅವಕಾಶವಿದ್ದು, ಈ ಅವಕಾಶವನ್ನು ಕಾಲೇಜಿಗೆ ಸಂಬಂಧಿಸಿದಂತೆ ಹಾಗೂ ವೈಯಕ್ತಿಕವಾಗಿ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ತರಗತಿ ಅಧ್ಯಾಪಕರ/ ಆಪ್ತ ಸಲಹಾ ಸಮಿತಿ ಜೊತೆಗೆ ಚಚರ್ಿಸಿ ಪರಿಹಾರ ಕಂಡುಕೊಳ್ಳುವುದು.
 • ಸಹಪಾಠಿಗಳೊಂದಿಗೆ, ವಿದ್ಯಾರ್ಥಿನಿಯರೊಂದಿಗೆ ಪರಸ್ಪರ ಗೌರವ, ಸಭ್ಯತೆ, ಸೌಹಾರ್ದತೆಯೊಂದಿಗೆ ವತರ್ಿಸುವುದು.
 • ರಾಗಿಂಗ್ ಮಾಡುವುದು 1983ನೇ ಕರ್ನಾಟಕ  ಶಿಕ್ಷಣ ಅಧಿನಿಯಮದ 116ನೇ ಪ್ರಕರಣದಡಿಯಲ್ಲಿ ಶಿಕ್ಷಾರ್ಹವಾಗಿದೆ.
 • ಅಮಲುಕಾರಕ ವಸ್ತುಗಳ ಬಳಕೆ ಮತ್ತು ಸಂಗ್ರಹಗಳನ್ನು ನಿಷೇಧಿಸಲಾಗಿದೆ.
Go to top