Celebrated Rashtriya Eykyatha Sapthaha on 19th November 2020

Attachments:
Download this file (NSS PP_compressed.pdf)NSS PP[NSS PP]3423 kB

NSS 2019-2020

ದಿನಾಂಕ 5-10-2019 ರ ಶನಿವಾರದಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಪನಹಳ್ಳಿಯ ರಾಷ್ಟ್ರೀಯ ಸೇವಾ ಯೋಜನೆಯ ಮೂರು ಘಟಕಗಳ ವತಿಯಿಂದ 150ನೇ ಗಾಂಧಿ ಜಯಂತಿ ಪ್ರಯುಕ್ತ ಪಟ್ಟಣದ ಪ್ರವಾಸಿ ಮಂದಿರದ ಸುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಸಮುದಾಯದ ಜೊತೆ ಬೆರೆತು ಸಮಾಜ ಅಭಿವೃದ್ಧಿಗೆ ಶ್ರಮಿಸುವ ಆಶಯವನ್ನು ಇಟ್ಟುಕೊಂಡು ಕಾರ್ಯವನ್ನು ನಿರ್ವಹಿಸಲು ಮುಂದಾಗಿವೆ.ಕಳೆದ ಸೆಮಿಸ್ಟರ್ ಅವಧಿಯಲ್ಲಿ ತಾಲೂಕಿನ ನ್ಯಾಯಾಲಯದ ಸುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಾಗೂ ವಿಶ್ವ ಜಲದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 2019-20 ನೇ ಸಾಲಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಶ್ರಮದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಾರಂಭವಾಗಿ ಪಟ್ಟಣದ ಪ್ರವಾಸಿ ಮಂದಿರದ ಸುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶ್ರಮದಾನ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಅಧಿಕ ಸ್ವಯಂಸೇವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು. ಈ ಶ್ರಮದಾನ ಕಾರ್ಯಕ್ರಮದಲ್ಲಿ ಶ್ರೀ ನಿಂಗಪ್ಪ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಉಪವಿಭಾಗ ಹರಪನಹಳ್ಳಿ ಇವರು ಭಾಗವಹಿಸವುದರ ಜೊತೆಗೆ ಸ್ವಯಂಸೇವಕರೆಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಿಸಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ ಕುಬೇಂದ್ರನಾಯ್ಕ ಸಹಾಯಕ ಇಂಜಿನಿಯರ್, ಪ್ರವಾಸಿ ಮಂದಿರದ ಸಹಾಯಕರಾದ ರಾಜು ಮತ್ತಿತರರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಹುಚ್ಚರಾಯಪ್ಪ ಕೆ ಎಂ, ಶ್ರೀಮತಿ ಸುರೇಖಾ. ಬಿ ಹಾಗೂ ಸಹಾಯಕ ಪ್ರಾಧ್ಯಾಪಕರುಗಳಾದ
ಬಸವರಾಜ ಎ.ಡಿ, ರಹಮತ್. ಜಿ, ಪುನೀತ್ ರಾಜ್, ಪ್ರಭುನಾಯ್ಕ ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು.

ದಿನಾಂಕ 24-9-2019 ರ ಮಂಗಳವಾರದಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಪನಹಳ್ಳಿ ಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1,2 ಮತ್ತು 3 ರ ವತಿಯಿಂದ 50 ನೇ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ನಿಮಿತ್ತ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರುಗಳಿಂದ ಶ್ರಮದಾನ ಕಾರ್ಯಕ್ರಮವನ್ನು ಕಾಲೇಜು ಆವರಣವನ್ನು ಸ್ವಚ್ಛಗೊಳಿಸುವುದರ ಮೂಲಕ ನೆರವೇರಿಸಲಾಯಿತು.ನಂತರ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕರು ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಷಣ್ಮುಖನಗೌಡ್ರು ನೆರವೇರಿಸಿ ತಮ್ಮ ಉದ್ಘಾಟನಾ ನುಡಿಯಲ್ಲಿ ಸ್ವಯಂಸೇವಕರು ಸಮುದಾಯದ ಜೊತೆ ಉತ್ತಮ ಸಂಪರ್ಕವನ್ನು ಬೆಳೆಸಿಕೊಳ್ಳಬೇಕು ಆ ಮೂಲಕ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎನ್ ಎಂ ನಾಗರಾಜ ರವರು ವಹಿಸಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಕಾಲೇಜಿನ ಸುತ್ತ ಮುತ್ತ ವಾತಾವರಣವನ್ನು ಹಾಗೂ ಪಟ್ಟಣದ ಹಲವಾರು ಸ್ಥಳಗಳಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಆ ಮೂಲಕ ರಾಷ್ಟ್ರ ದ ಅಭ್ಯುದಯಕ್ಕೆ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ
ಇತಿಹಾಸ ವಿಭಾಗದ ಮುಖ್ಯಸ್ಥರು ಆದ ಶ್ರೀ. ವಿಜಯ್ ಕುಮಾರ್, ರಾಜ್ಯಶಾಸ್ತ್ರ ವಿಭಾಗದ ಡಾ.ಸುರೇಶ್, ಐ.ಕ್ಯೂ.ಎ.ಸಿ ಸಂಚಾಲಕರಾದ ಮೆಹಬೂಬ್ ಭಾಷಾ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪುನೀತ್ ರಾಜ್, ಕಾರ್ಯಕ್ರಮ ಅಧಿಕಾರಿಗಳಾದ ವೀರೇಶ್, ಹುಚ್ಚರಾಯಪ್ಪ ಕೆ ಎಂ ,ಶ್ರೀಮತಿ ಸುರೇಖಾ.ಬಿ, ಗಿರೀಶ್,ರಹಮತ್ ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳೆಲ್ಲರೂ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಕಾರ್ಯಕ್ರಮಾಧಿಕಾರಗಳಾದ ವೀರೇಶ್ ರವರು ನುಡಿದರು. ಪ್ರತಿಜ್ಞಾ ವಿಧಿಯನ್ನು ಕಾರ್ಯಕ್ರಮಾಧಿಕಾರಿಗಳಾದ ಹುಚ್ಚರಾಯಪ್ಪ ಕೆ ಎಂ ರವರು ಬೋಧಿಸಿದರು.ಕಾರ್ಯಕ್ರಮದ ಸ್ವಾಗತಭಾಷಣವನ್ನು ಕೊಟ್ರೇಶ್, ರಾಷ್ಟ್ರೀಯ ಸೇವಾಯೋಜನೆಯ ಗೀತೆಯನ್ನು ಸೌಂದರ್ಯ ಮತ್ತು ತಂಡದವರು ಹಾಗೂ ನಿರೂಪಣೆಯನ್ನು ಗುರುರಾಜ್ ತೃತೀಯ ಬಿ.ಎ ವಿದ್ಯಾರ್ಥಿ ನಡೆಸಿಕೊಟ್ಟರು.

ದಿನಾಂಕ 14-8-2019 ರ ಬುಧವಾರದಂದು ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1,2 ಮತ್ತು 3 ನೇ ಘಟಕಗಳ ವತಿಯಿಂದ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೂರ್ವಭಾವಿಯಾಗಿ ಕಾಲೇಜು ಆವರಣ ಸ್ವಚ್ಛತೆ ಹಾಗೂ ಸಿದ್ಧತೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ರಂಗೋಲಿ,ವಿದ್ಯಾರ್ಥಿಗಳು ಸಾಲಾಗಿ ನಿಂತುಕೊಳ್ಳಲು ಗೆರೆಗಳನ್ನು ಹಾಕಿ ತಳಿರುತೋರಣಗಳಿಂದ ಸಿಂಗರಿಸಲಾಯಿತು. ಈ ಸಂದರ್ಭದಲ್ಲಿ ಮೂರು ಘಟಕಗಳ ಕಾರ್ಯಕ್ರಮಧಿಕಾರಿಗಳಾದ ಹುಚ್ಚರಾಯಪ್ಪ ಕೆ ಎಂ, ವೀರೇಶ್,ಶ್ರೀಮತಿ  ಸುರೇಖಾ ಹಾಗೂ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರೂ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಎಲ್ಲಾ  ಭಾಗವಹಿಸಿದ್ದರು.

Attachments:
Download this file (NSS Special camp 2018-19.pdf)NSS Special Camp 2018 - 19[NSS Special Camp 2018 - 19]9447 kB

2018-19ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ

Go to top