ಭಾರತೀಯ ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ರಕ್ತ ದಾನ ಹಾಗೂ ರಕ್ತ ತಪಾಸಣೆ ಕಾರ್ಯಕ್ರಮ ಕೈಗೊಳ್ಳಲಾಯಿತು. 

ದಿನಾಂಕ 23-01-2020 ರ ಗುರುವಾರದಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು, ಭಾರತೀಯ ಯುವ ರೆಡ್ ಕ್ರಾಸ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಟಾಸ್ಕ್ ಫೋರ್ಸ (ರಕ್ತ ಸುರಕ್ಷತೆ) ಬಳ್ಳಾರಿ ಮತ್ತು ಸಾರ್ವಜನಿಕ ಆಸ್ಪತ್ರೆ ಹರಪನಹಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಯುವದಿನಾಚರಣೆ ಹಾಗೂ ಸ್ವಾಮಿವಿವೇಕಾನಂದ ಜನ್ಮದಿನದ ಅಂಗವಾಗಿ ಹೆಚ್.ಐ.ವಿ/ ಏಡ್ಸ್ ನಿಯಂತ್ರಣ ಹಾಗೂ ಸ್ವಯಂಪ್ರೇರಿತ ರಕ್ತ ದಾನದ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಗಿರೀಶ್ ಜಿಲ್ಲಾ ಮೇಲ್ವಿಚಾರಕರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಹಣಾ ಘಟಕ ಬಳ್ಳಾರಿ ಇವರು ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಸ್ವಾಮಿ ವಿವೇಕಾನಂದರ ಜೀವನ ಮತ್ತು ಆದರ್ಶಗಳನ್ನು ತಿಳಿಸುತ್ತಾ ದೈಹಿಕ ಬಲದ ಜೊತೆಗೆ ಮನೋಬಲ ಮತ್ತು ಆತ್ಮಬಲವನ್ನು ಬೆಳಸಿಕೊಳ್ಳಲು ತಿಳಿಸಿದರು. ಅಲ್ಲದೆ ಏಡ್ಸ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುತ್ತಾ, ರಕ್ತ ದಾನದ ಮಹತ್ವವನ್ನು ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.ದಾನಗಳಲ್ಲಿ ಅತೀ ಶ್ರೇಷ್ಠ ದಾನ ರಕ್ತ ದಾನ ಅದು ಇನ್ನೊಬ್ಬರ ಜೀವವನ್ನೇ ಉಳಿಸುತ್ತೆ ಎಂದು ಹೇಳಿದರು.ಕಾರ್ಯಕ್ರಮಕ್ಕೆ ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ್ದ ಮಲ್ಲಿಕಾರ್ಜುನ ಆಪ್ತಸಮಾಲೋಚಕರು ಸಾರ್ವಜನಿಕ ಆಸ್ಪತ್ರೆ ಹರಪನಹಳ್ಳಿ ಇವರು ಮಾತನಾಡುತ್ತಾ ಏಡ್ಸ್ ನಿಯಂತ್ರಣದ ಬಗ್ಗೆ ಹಾಗೂ ಏಡ್ಸ್ ತಡೆಗಟ್ಟುವ ಬಗ್ಗೆ ಮಾರ್ಗೋಪಾಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎನ್ ಎಂ ನಾಗರಾಜ ರವರು ವಹಿಸಿಕೊಂಡ ಸದೃಢ ದೇಶವನ್ನು ಕಟ್ಟಲು ಸದೃಢ ಯುವಕರ ಅವಶ್ಯಕತೆ ಇದೆ.ಹಾಗಾಗಿ ವಿದ್ಯಾರ್ಥಿಗಳು ಉತ್ತಮ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಷಣ್ಮುಖನಗೌಡ್ರು ಮುಖ್ಯಸ್ಥರು ಅರ್ಥಶಾಸ್ತ್ರ ವಿಭಾಗ, ಶ್ರೀಮತಿ ನಾಗರತ್ನ.ಬಿ.ಹೊಸಮನಿ ಗ್ರಂಥಪಾಲಕರು, ಡಾ.ಭೀಮಪ್ಪ ಆಗಮಿಸಿದ್ದರು. ಕಾರ್ಯಕ್ರಮ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಬಗ್ಗೆ , ಏಡ್ಸ್ ನಿಯಂತ್ರಣ ಹಾಗೂ ರಕ್ತ ದಾನದ ಬಗ್ಗೆ ಕ್ವಿಜ್ ಕಾರ್ಯಕ್ರಮ ಹಮ್ಮಿಕೊಂಡು ವಿಜೇತರಿಗೆ ಕಾರ್ಯಕ್ರಮದಲ್ಲಿ ನಗದು ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಪ್ರಭುನಾಯ್ಕ. ಎಸ್ ಸಂಚಾಲಕರು ಭಾರತೀಯ ಯುವ ರೆಡ್ ಕ್ರಾಸ್ ಇವರು ಮಾತನಾಡಿದರು,ಸ್ವಾಗತಭಾಷಣವನ್ನು ಶ್ರೀಮತಿ ಸುರೇಖಾ.ಬಿ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳು ನೆರವೇರಿಸಿದರು. ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಹುಚ್ಚರಾಯಪ್ಪ ಕೆ ಎಂ ಕಾರ್ಯಕ್ರಮಾಧಿಕಾರಗಳು ರಾಷ್ಟ್ರೀಯ ಸೇವಾ ಯೋಜನೆ ಇವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಬಸವರಾಜ ಎ.ಡಿ,ವಿಜಯಕುಮಾರ್.ಎಂ, ಗಿರೀಶ್ ಎಂ.ಎಸ್,ಪುನೀತ್ ರಾಜ್, ವೀರೇಶ್ ಎಸ್.ಎಂ, ಭಾಗವಹಿಸಿದ್ದರು.

Go to top