ದಿನಾಂಕ: 04-08-2016ರಂದು ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಭರಮಸಾಗರದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಗುಡ್ಡಗಾಡು ಓಟದ ಸ್ಪಧರ್ೆಯಲ್ಲಿ ನಮ್ಮ ಕಾಲೇಜಿನ 9 ಕ್ರೀಡಾ ಪಟುಗಳು ಭಾಗವಹಿಸಿ, ಸ್ಪಧರ್ೆಯಲ್ಲಿ ಪ್ರಥಮ ಸ್ಥಾನವನ್ನು ಅಜರ್ುನ್ ಎ, ದ್ವಿತೀಯ ಸ್ಥಾನವನ್ನು ನಾಗರಾಜ ಇ ಹಾಗೂ ಏಳನೇ ಸ್ಥಾನವನ್ನು ಹರೀಶ ಯು ಪಡೆದಿರುತ್ತಾರೆ. ಹಾಗೂ ಮೇಲಿನ ಮೂರು ಕ್ರೀಡಾ ಪಟುಗಳು ಅಖಿಲ ಭಾರತ ಅಂತರ ವಿಶ್ವ ವಿದ್ಯಾನಿಲಯಕ್ಕೆ ಆಯ್ಕೆಯಾಗಿ ದಿನಾಂಕ: 28-10-2016ರಂದು ಆರ್.ಜಿ.ಯು.ಹೆಚ್.ಎಸ್ ಆಳ್ವಾಸ್ ಕಾಲೇಜು ಮೂಡಬಿದಿರೆಯಲ್ಲಿ ಜರುಗಿದ ಅಖಿಲ ಭಾರತ ಅಂತರ ವಿಶ್ವ ವಿದ್ಯಾನಿಲಯ ಕ್ರೀಡಾ ಕೂಟದಲ್ಲಿ ಭಾಗವಹಿಸಿರುತ್ತಾರೆ.
ದಿನಾಂಕ: 20-08-2016ರಂದು ಸಕರ್ಾರಿ ಕಲಾ ಪ್ರಥಮ ದಜರ್ೆ ಕಾಲೇಜು ಚಿತ್ರದುರ್ಗದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಫುಟ್ಬಾಲ್ ಆಯ್ಕೆಯಲ್ಲಿ 6 ಕ್ರೀಡಾ ಪಟುಗಳು ಭಾಗವಹಿಸಿ ನೂರ್ ಆಹಮ್ಮದ್ ಎಂಬ ಕ್ರೀಡಾಪಟು ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿರುತ್ತಾನೆ.
ದಿನಾಂಕ: 15-09-2016ರಂದು ಶ್ರೀ ಮಂಜುನಾಥ ಪ್ರಥಮ ದಜರ್ೆ ಕಾಲೇಜು ದಾವಣಗೆರೆಯಲ್ಲಿ ನಡೆದ ಜೂಡೋ ಪಂದ್ಯಾವಳಿ/ಆಯ್ಕೆಯಲ್ಲಿ ನಮ್ಮ ಕಾಲೇಜಿನ 5 ಕ್ರೀಡಾಪಟುಗಳು ಭಾಗವಹಿಸಿ ಪರಮೇಶ ನಾಯ್ಕ ಹಾಗೂ ಹರಪನಹಳ್ಳಿ ವಿನಾಯಕ ಬಂಗಾರದ ಪದಕವನ್ನು ಪಡೆದಿರುತ್ತಾರೆ. ಹಾಗೂ ಮಾರುತಿ ಎಂ ಬೆಳ್ಳಿ ಪದಕವನ್ನು ಪಡೆದಿರುತ್ತಾನೆ, ಸದರಿ ಆಯ್ಕೆಯಲ್ಲಿ ಪರಮೇಶ ನಾಯ್ಕ ಹಾಗೂ ಹರಪನಹಳ್ಳಿ ವಿನಾಯಕ ದಾವಣಗೆರೆ ವಿಶ್ವವಿದ್ಯಾನಿಲಯ ಜೂಡೋ ತಂಡಕ್ಕೆ ಆಯ್ಕೆಯಾಗಿ ದಿನಾಂಕ; 03-11-2016ರಿಂದ 06-11-2016ರವರೆಗೆ ಕುರುಕ್ಷೇತ್ರ ವಿಶ್ವವಿದ್ಯಾನಿಲಯ ಹರಿಯಾಣದಲ್ಲಿ ನಡೆದ ಜೂಡೋ ಸ್ಪಧರ್ೆಯಲ್ಲಿ ಭಾಗವಹಿಸಿರುತ್ತಾರೆ.
ದಿನಾಂಕ: 27-09-2016ರಿಂದ 29-09-2016ರವರೆಗೆ ಬಾಪುಜಿ ಆಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಆಂಡ್ ರೀಸಚರ್್ನವರು ನಡೆಸಿದ ದಾವಣಗೆರೆ ವಿಶ್ವವಿದ್ಯಾನಿಲಯ ಚೆಸ್ ಪಂದ್ಯಾವಳಿ/ಆಯ್ಕೆಯಲ್ಲಿ 5ಪುರುಷ ಮತ್ತು 5 ಮಹಿಳಾ ಕ್ರೀಡಾ ಪಟುಗಳು ಭಾಗವಹಿಸಿ 4ನೇ ಸ್ಥಾನವನ್ನು ಪಡೆದಿರುತ್ತಾರೆ.
ದಿನಾಂಕ: 4-10-2016ರಿಂದ 05-10-2016ರವರೆಗೆ ವೇದಾವತಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಹಿರಿಯೂರಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿ/ಆಯ್ಕೆಯಲ್ಲಿ 12 ಪುರುಷ ಮತ್ತು 07 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿ ಸುಮ ಜಿ ಎಂ ಕ್ಯಾಲಿಕಟ್ ವಿಶ್ವವಿದ್ಯಾನಿಲಯ ಕೇರಳದಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಸ್ಪಧರ್ೆಯಲ್ಲಿ ಭಾಗವಹಿಸಿರುತ್ತಾರೆ.
ದಿನಾಂಕ: 08-10-2016ರಂದು ವಾಣಿ ಸಕ್ಕರೆ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಹಿರಿಯೂರಿನಲ್ಲಿ ನಡೆದ ಪುರುಷ ಮತ್ತು ಮಹಿಳೆಯರ ದಾವಣಗೆರೆ ವಿಶ್ವವಿದ್ಯಾನಿಲಯ ಖೋ-ಖೋ ತಂಡದ ಆಯ್ಕೆಯಲ್ಲಿ 8 ಪುರುಷ ಮತ್ತು 6 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿ ಸದರಿ ಆಯ್ಕೆಯಲ್ಲಿ ಪ್ರತೀಕ್ಷಾ ಎಸ್ ಮತ್ತು ಸಾವಿತ್ರ ಎಂ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿ ಚೆಟ್ಟಿನಾಡು ಎ.ಆರ್.ಇ ವಿಶ್ವವಿದ್ಯಾನಿಲಯ ಚನೈನಲ್ಲಿ ದಿನಾಂಕ: 02-02-2017ರಿಂದ 05-02-2017ರವರಗೆ ನಡೆದ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ.
ದಿನಾಂಕ: 21-10-2016ರಿಂದ 23-10-2016ರವರೆಗೆ ಎಸ್.ಜೆ.ಎಂ. ಮಹಿಳಾ ಕಾಲೇಜು ಮತ್ತು ಎಸ್.ಜೆ.ಎಂ. ಕಲಾ ಕಾಲೇಜು ಚಂದ್ರವಳ್ಳಿ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಅಥ್ಲೇಟಿಕ್ಸ್ ಸ್ಪಧರ್ೆಯಲ್ಲಿ 27 ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಭಾಗವಹಿಸಿ 800ಮೀ, 1500ಮೀ, 5000ಮೀ, 10000ಮೀ ಹಾಗೂ ಹಾಫ್ ಮ್ಯಾರಥಾನ್ ಸ್ಪಧರ್ೆಯಲ್ಲಿ ಬಂಗಾರ ಮತ್ತು ಬೆಳ್ಳಿ ಪದಕಗಳನ್ನು ಪಡೆದಿರುತ್ತಾರೆ. ಸದರಿ ಕ್ರೀಡಾಕೂಟದಲ್ಲಿ 800ಮೀ ಹಾಗೂ 1500ಮೀನಲ್ಲಿ ಅಜರ್ುನ ಎ ಮತ್ತು 5000ಮೀ ಮತ್ತು 10000ಮೀನಲ್ಲಿ ನಾಗರಾಜ ಇ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿ ದಿನಾಂಕ: 10-01-2017ರಿಂದ 16-01-2017ರವರೆಗೆ ಅಣ್ಣಾ ವಿಶ್ವವಿದ್ಯಾನಿಲಯ ಚನೈನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ.
ದಿನಾಂಕ:25-10-2016ರಿಂದ 26-10-2016ರವರೆಗೆ ಸಕರ್ಾರಿ ಕಲಾ ಪ್ರಥಮ ದಜರ್ೆ ಕಾಲೇಜು ಚಿತ್ರದುರ್ಗದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ/ಆಯ್ಕೆಯಲ್ಲಿ ಕಾಲೇಜು ತಂಡ ಭಾಗವಹಿಸಿ ಸದರಿ ಆಯ್ಕೆಯಲ್ಲಿ ಕೊರಚರ ದುರುಗಪ್ಪ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ದಿನಾಂಕ:28-01-2017ರಿಂದ 29-01-2017ರವರೆಗೆ ಹೆಚ್.ಪಿ.ಪಿ.ಸಿ. ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಚಳ್ಳಕೆರೆಯಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ನಮ್ಮ ಕಾಲೇಜಿನ ತಂಡ ನಾಲ್ಕನೇ ಸ್ಥಾನವನ್ನು ಪಡೆದಿರುತ್ತದೆ.
ದಿನಾಂಕ: 20-02-2017ರಿಂದ 21-02-2017ರವರೆಗೆ ಎಸ್.ಟಿ.ಜೆ. ದೈಹಿಕ ಶಿಕ್ಷಣ ಮಹಾವಿದ್ಯಾಲಯ ದಾವಣಗೆರೆಯಲ್ಲಿ ನಡೆದ ಮಹಿಳಾ ಕ್ರೀಡಾಕೂಟದಲ್ಲಿ ನಮ್ಮ ಕಾಲೇಜಿನ ಖೋ-ಖೋ, ಕಬಡ್ಡಿ, ವಾಲಿಬಾಲ್ ಹಾಗೂ ಟೆನಿಕಾಯಿಟ್ ಪಂದ್ಯಾವಳಿಯಲ್ಲಿ 18 ಕ್ರೀಡಾಪಟುಗಳು ಭಾಗವಹಿಸಿ ಖೋ-ಖೋ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

 

Go to top